ಸೋಮವಾರ, ಡಿಸೆಂಬರ್ 16, 2019

ಸೋಮವಾರ, ಸೆಪ್ಟೆಂಬರ್ 6, 2010

ಆಸ್ತಿಕತೆಯೋ ನಾಸ್ತಿಕಾತೆಯೋ

ಆಸ್ತಿಕತೆಯೋ ನಾಸ್ತಿಕಾತೆಯೋ


ಒಂದು ಶನಿವಾರ ಹನುಮ ದೇವರ ದರ್ಶನ ಮಾಡಲು ನುಗ್ಗೀಕೇರಿ ಹನುಮ ದೇವರ ಗುಡಿಗೆ ಹೋಗಿದ್ದೆ. ದರ್ಶನ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟ್ರಲ್ಲಿ ಒಬ್ಬ ಮಧ್ಯ ವಯಸ್ಸಿನ ಹೆಣ್ಣು ಮಗಳು ಬಂದು ಒಂದು ಪ್ರಿಂಟ್ ಮಾಡಿದ ಕಾಗದವನ್ನು ಕೈಗೆ ಕೊಟ್ಟಳು. ನಾನು ಏನು ಎಂದು ತೆಗೆದು ನೋಡಿವಷ್ಟರಲ್ಲಿ ಆ ಮಹಿಳೆ ಅಲ್ಲಿರಲಿಲ್ಲ. ನಾನು ನಿಧಾನವಾಗಿ ಆ ಮಹಿಳೆ ಕೊಟ್ಟ ಕಾಗದವನ್ನು ತೆಗೆದು ನೋಡಿದೆ, ಅದು ಮುದ್ರಿಸಿದ ಹನುಮಾನ್ ಚಾಲೀಸ್ ಮಂತ್ರ ಆಗಿತ್ತು. ನಾನು ಖುಶಿಯಿಂದ ಓದುತ್ತಾ ಹೋದೆ. ಕೊನೆಗೆ ಅದರಲ್ಲಿಯ ಕೊನೆಯ ಸಾಲು ನನ್ನನ್ನು ಸಂಕಷ್ಟಕ್ಕೆ ಈಡು ಮಾಡಿತ್ತು. ಅದರಲ್ಲಿಯ ಒಕ್ಕಣೆ ಹೀಗಿತ್ತು., ಇದನ್ನು ಓದಿ ಎಲ್ಲಿ ಬೇಕಾದಲ್ಲಿ ಎಸೆಯಬೇಡಿರಿ, ಇದನ್ನು ಓದಿ ನಂತರ ನೀವು ಸಹ ಇದೆ ತರಹದ ೧೦೦ ಪ್ರತಿಗಳನ್ನು ಮಾಡಿ ಹಂಚಬೇಕು, ಇದನ್ನು ನಿರ್ಲಕ್ಷಿಸಬೇಡಿ, ನಿರ್ಲಕ್ಷಿಸಿದರೆ ನಿಮಗೆ ಆಪತ್ತು ಬರಬಹುದು ಎಚ್ಚರ. ಇದರ ಜೊತೆಗೆನೆ ಇದನ್ನು ನಿರ್ಲಕ್ಷಿಸಿ ತೊಂದರೆಗೊಳಗದವರ ಅನುಭವವನ್ನು ಕೊಟ್ಟಿದ್ದರು.

ಈಗ ಹೇಳಿ ಇದು ನಿಜವೋ ಅಥವಾ ಪ್ರಿಂಟಿಂಗ್ ಪ್ರೆಸ್ ನವರ ಮಾರ್ಕೆಟಿಂಗ್ ತಂತ್ರವೋ.

ಮಂಗಳವಾರ, ಆಗಸ್ಟ್ 11, 2009

ನನ್ನ ಲ್ಯಾಬಿನಲ್ಲಿ ಒಂದು ದಿನ.

ನಾನು ಕಾಲೇಜಿಗೆ ಸೇರಿ ಸ್ವಲ್ಪವೇ ದಿನ ಆಗಿತ್ತು. ಒಂದು ದಿನ ಒಬ್ಬ ವಿದ್ಯಾರ್ಥಿ ನನ್ನ ಬಳಿ ಬಂದು "ಸರ್ರ್ ನನಗ ಪ್ರೋಗ್ರಾಮ್ ಪ್ರಿಂಟ್ ಔಟ್ ಬೇಕು" ಎಂದ, ನಾನು ಆಯ್ತಪ್ಪ ಪ್ರೋಗ್ರಾಮ್ ಫೈಲ್‌ನೇಮ್ ಲಿಸ್ಟ್ ಕೊಡು ಎಂದೆ. ಪ್ರೋಗ್ರಾಮ್ ನ ಒಂದೊಂದೇ ಫೈಲ್‌ನೇಮ್ ನೋಡ್ತಾ ಕಂಪ್ಯೂಟರ್ನಲ್ಲಿ ಪ್ರಿಂಟ್ ಔಟ್ ಕೊಡ್ತಾ ಹೋದೆ. ಆಗ ಅದರಲ್ಲಿ ಇದ್ದ ಒಂದು ಫೈಲ್‌ನೇಮ್ ನನ್ನ ಗಮನ ಸೆಳೆಯಿತು. ಆ ಪ್ರೋಗ್ರಂನ ಫೈಲ್‌ನೇಮ್ porn.c ಎಂದು ಇತ್ತು. ನನಗೆ ಸಿಟ್ಟು ಬಂದು "ಏಯ್ ಇಂತಹ ಅಶ್ಲೀಲ ಫೈಲ್‌ನೇಮ್ ಯಾಕೆ ಕೊಟ್ಟೆ ಬೇರೆ ಫೈಲ್‌ನೇಮ್ ಕೊಡು ಇದಕ್ಕೆ" ಎಂದು ಗದರಿದೆ. ಅದಕ್ಕೆ ಆ ಹುಡುಗ " ಯಾಕಾರಿ ಸರ್ರ್ ಅಡ್ರಾಗೇನ್ ತಪ್ಪು ಇದೆ" ಎಂದ. ನಾನು porn ಇದರ ಅರ್ಥವನ್ನು ಹೇಳಿದೆ. ಆಗ ಆ ಹುಡುಗ ಅಯ್ಯೋ ಸರ ತಪ್ಪು ತಿಳೀಬೇಡಿ, porn.c ಅಂದರ "positive or negative" ಅಂತ positive or negative ಸಂಖ್ಯೆ ಯಾವ್ದೂ ಅಂತ ಹೇಳೋದು ಅಷ್ಟ ಅಂದ. ನನಗೆ ಸುಸ್ತೋ ಸುಸ್ತು.