ಮಂಗಳವಾರ, ಆಗಸ್ಟ್ 11, 2009
ನನ್ನ ಲ್ಯಾಬಿನಲ್ಲಿ ಒಂದು ದಿನ.
ನಾನು ಕಾಲೇಜಿಗೆ ಸೇರಿ ಸ್ವಲ್ಪವೇ ದಿನ ಆಗಿತ್ತು. ಒಂದು ದಿನ ಒಬ್ಬ ವಿದ್ಯಾರ್ಥಿ ನನ್ನ ಬಳಿ ಬಂದು "ಸರ್ರ್ ನನಗ ಪ್ರೋಗ್ರಾಮ್ ಪ್ರಿಂಟ್ ಔಟ್ ಬೇಕು" ಎಂದ, ನಾನು ಆಯ್ತಪ್ಪ ಪ್ರೋಗ್ರಾಮ್ ಫೈಲ್‌ನೇಮ್ ಲಿಸ್ಟ್ ಕೊಡು ಎಂದೆ. ಪ್ರೋಗ್ರಾಮ್ ನ ಒಂದೊಂದೇ ಫೈಲ್‌ನೇಮ್ ನೋಡ್ತಾ ಕಂಪ್ಯೂಟರ್ನಲ್ಲಿ ಪ್ರಿಂಟ್ ಔಟ್ ಕೊಡ್ತಾ ಹೋದೆ. ಆಗ ಅದರಲ್ಲಿ ಇದ್ದ ಒಂದು ಫೈಲ್‌ನೇಮ್ ನನ್ನ ಗಮನ ಸೆಳೆಯಿತು. ಆ ಪ್ರೋಗ್ರಂನ ಫೈಲ್‌ನೇಮ್ porn.c ಎಂದು ಇತ್ತು. ನನಗೆ ಸಿಟ್ಟು ಬಂದು "ಏಯ್ ಇಂತಹ ಅಶ್ಲೀಲ ಫೈಲ್‌ನೇಮ್ ಯಾಕೆ ಕೊಟ್ಟೆ ಬೇರೆ ಫೈಲ್‌ನೇಮ್ ಕೊಡು ಇದಕ್ಕೆ" ಎಂದು ಗದರಿದೆ. ಅದಕ್ಕೆ ಆ ಹುಡುಗ " ಯಾಕಾರಿ ಸರ್ರ್ ಅಡ್ರಾಗೇನ್ ತಪ್ಪು ಇದೆ" ಎಂದ. ನಾನು porn ಇದರ ಅರ್ಥವನ್ನು ಹೇಳಿದೆ. ಆಗ ಆ ಹುಡುಗ ಅಯ್ಯೋ ಸರ ತಪ್ಪು ತಿಳೀಬೇಡಿ, porn.c ಅಂದರ "positive or negative" ಅಂತ positive or negative ಸಂಖ್ಯೆ ಯಾವ್ದೂ ಅಂತ ಹೇಳೋದು ಅಷ್ಟ ಅಂದ. ನನಗೆ ಸುಸ್ತೋ ಸುಸ್ತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
:) chennagide ri
ಪ್ರತ್ಯುತ್ತರಅಳಿಸಿ